Sunday 8 January 2017



ಸಂಭ್ರಮದ  ಮದದಲ್ಲಿ 
ನಮ್ಮವರೆಂದು ಬೀಗಿದ  
ಬಿಗುಮಾನದ ಭ್ರಮೆಯ 
ಮಾನ ಕಳೆದು 
ಬಯಲಿಗೆಳೆದಿಹರು 
ಅದೇ ನಮ್ಮವರು 

ಜೀವನಕ್ಕೆ  ಜೀವದಂತಿದ್ದ 
ಬಂಧಗಳೆಲ್ಲ 
ಕೊಟ್ಟ ಮಾತಿಗೆ 
ಇಟ್ಟ  ಆಣೆಗೆ  
ಹುಸಿನಗೆ ಬೀರಿ 
ಬಿರುಕು ಬಿಟ್ಟು 
ಬರಡಾಗಿಹರು 

ಭದ್ರತೆ ಇಲ್ಲದ ಬದುಕು 
ಎತ್ತಣದಿಂದೆತ್ತ  
ಸಾಗುವುದೋ 
ಅರಿತವರ್ಯ್ಯಾರು 

ಇದ್ದಷ್ಟು ದಿನ ಇದ್ದು ಬಿಡಬೇಕು 
ಭವಬಂಧವ  ತೊರೆದು 
ಬಂದದ್ದು ಬಂದಹಾಗೆ 
ಅನಿವಾರ್ಯದಿ ಅನುಭವಿಸಿ 
ಬದುಕಿನಲ್ಲಿ ಬದಲಾದ 
ಬದುಕನ್ನು 
ಬದುಕಿಬಿಡಬೇಕು
 ಸಾರ್ಥಕದಿ 
ಸಾಯುವ ಮುನ್ನ 

#ಲಕ್ಕಿ_ಗರ್ಲ್ 


ಏಯ್ #ಹುಡ್ಗ

ನೋಡಲ್ಲಿ
ಇಳಿಸಂಜೆಯ
ಸೂರ್ಯನು
ಸದ್ದಿಲ್ಲದೆ ಮೆಲ್ಲನೆ
ಮುಳುಗಿದನು
ಒಲವಿನ
ಕಡಲೊಳಗೆ
ನಮ್ಮಂತೆ ..

#ಹಾಗೇ_ಸುಮ್ಮನೇ


ನೀನೋ
ಅಸ್ಥಿರತೆಯ
ಅಬ್ಬರದ
ಅಲೆಮಾರಿ
ಅಲೆಗಳಂತೆ..
ನಾನೋ
ಸ್ಥಿರತೆಯ
ನಿಶ್ಯಬ್ಧತೆಯ
ಹಠಮಾರಿ
ತೀರದಂತೆ ..
ನಮ್ಮಿಬ್ಬರ
ಮನಸು
ಮೊಂಡುತನದ
ಮೌನವಂತೆ..
#ಹಾಗೇ_ಸುಮ್ಮನೇ
#ಲಕ್ಕಿ_ಗರ್ಲ್_ಚೆರ್ರಿಪೊಯೆಟ್


ಇದ್ಯಾವುದು ದೂರದಲ್ಲಿ ಕಾಣುವ
ಮನಾಲಿ ಮಂಜಿನ ಪರ್ವತವೋ
ಕಡಲ ಕಿನಾರೆಯ
ಕಪ್ಪೆ ಚಿಪ್ಪಿನಾ ರಾಶಿಯೊ
ಇವಳೇ.. ..
ಜಾತ್ರೆಯಲ್ಲಿ ಮಾರುವ
ಬತಾಸು ಬೆಂಡೊ
ನನ್ನವನ ಸಾಮ್ರಾಜ್ಯದಲ್ಲಿ
ನಾಯಿಕೊಡೆಯಂತೆ
ಬೆಳೆದ ಸಖಿಯರ ಹಿಂಡೋ  
#ಹಾಗೇ_ಸುಮ್ಮನೇ 
#ಲಕ್ಕಿ_ಗರ್ಲ್_ಚೆರಿಪೊಯೆಟ್ 
#lakshmi_lakki_girl

Monday 1 August 2016


 
ಬೆಳಕೆಲ್ಲ
ನಂದೆಂದು
ಹಟ್ಟಹಾಸದಿ
ಮೆರೆಯುತ್ತಿದ್ದ
ಜೋರಾಗಿ 
ಉರಿಯುವ
ದೀಪದ
ಮುಂದೆ
ಆರುವ
ಮುನ್ಸೂಚನೆ
ಅರಿಯದ
ಕಪಟಿ...

#ಲಕ್ಕಿ ಗರ್ಲ್   lakki girl    

Friday 24 June 2016


ನಂತರ 
ಜಾತ್ರೆ 
ಮರಣದ 
ನಂತರ 
ಯಾತ್ರೆ 
ಬದುಕಿನಲಿ 
ನಿರಂತರ 
ಮಾತ್ರೆ 

#ಹಾಗೇ_ಸುಮ್ಮನೇ  #ಲೈಫ್_ಇಷ್ಟೆನೇ 

#ಲಕ್ಕಿ_ಗರ್ಲ್ 

।।ಮೂಕ ಹಕ್ಕಿಯಾ ಮೌನ।।

ನಡುರಾತ್ರಿ 
ನಿದ್ದೆಗೆಡಿಸಿ
ಕಾಡಿದ ಸಾವಿರ
ಜಟಿಲ ಪ್ರಶ್ನೆಗಳನ್ನ
ನೀರವತೆಯಾ ಮನದಲ್ಲೇ
ಇರಿಸಿ ಮಲಗಿದ್ದೆನೆ

ನಿದ್ದೆಗೆಟ್ಟ ಪ್ರಶ್ನೆಗಳಿಗೆ
ಎಚ್ಚರಿಕೆಯಿಂದ
ಹುಡುಕಿದರೆ
ಉತ್ತಮ  ಉತ್ತರ
ದೊರಕದು  ಇಂದು

ಪ್ರಶ್ನೆಗಳೇ ಯಾಕೆ
ಉತ್ತರ ಹುಡುಕಿ
ಅಲೆಯಬೇಕು
ಬದಲಾದ ಕಾಲಕ್ಕೆ
ಉತ್ತರವೇ ಹುಡುಕಲಿ
ಬೇಕಿದ್ದ  ಪ್ರಶ್ನೆಗಳ ಎಂದು

ಸದ್ಯಕ್ಕೆ ಪ್ರಶ್ನೆಗಳು
ಪ್ರಶ್ನೆಗಳಾಗಿಯೇ
ಉಳಿದುಕೊಳ್ಳಲಿ
ಸಂಶಯಾಸ್ಪದ ಸುಳ್ಳು
ಉತ್ತರ ಸಿಕ್ಕು
ನಾ ಏನಾ ಮಾಡಲಿ

ಮುಂದೊಂದು ದಿನ
ತಬ್ಬಿಬ್ಬಾದ  ಉತ್ತರಗಳು
ಹುಡುಕುವುದು 
ಪ್ರಮುಖ ಪ್ರಶ್ನೆಗಳನ್ನ.. 
ತನಗೆ ತಾನೇ ಸರಿಯಾದ
ಅರ್ಥವ ಅರಿಯುತ್ತಾ 

ಅಲ್ಲಿಯ ವರೆಗೂ
ಮತಿಗೇಡಿ ಪ್ರಶ್ನೆಗಳಿಗೆ
ಮೌನವನ್ನೇ ಉತ್ತರವಾಗಿರಿಸಿದ್ದೆನೆ

।।ಕಾಲಯಾ ತಸ್ಮೈ ನಮಃ।।
  #ಲಕ್ಕಿ_ಗರ್ಲ್