Monday 1 August 2016


 
ಬೆಳಕೆಲ್ಲ
ನಂದೆಂದು
ಹಟ್ಟಹಾಸದಿ
ಮೆರೆಯುತ್ತಿದ್ದ
ಜೋರಾಗಿ 
ಉರಿಯುವ
ದೀಪದ
ಮುಂದೆ
ಆರುವ
ಮುನ್ಸೂಚನೆ
ಅರಿಯದ
ಕಪಟಿ...

#ಲಕ್ಕಿ ಗರ್ಲ್   lakki girl    

Friday 24 June 2016


ನಂತರ 
ಜಾತ್ರೆ 
ಮರಣದ 
ನಂತರ 
ಯಾತ್ರೆ 
ಬದುಕಿನಲಿ 
ನಿರಂತರ 
ಮಾತ್ರೆ 

#ಹಾಗೇ_ಸುಮ್ಮನೇ  #ಲೈಫ್_ಇಷ್ಟೆನೇ 

#ಲಕ್ಕಿ_ಗರ್ಲ್ 

।।ಮೂಕ ಹಕ್ಕಿಯಾ ಮೌನ।।

ನಡುರಾತ್ರಿ 
ನಿದ್ದೆಗೆಡಿಸಿ
ಕಾಡಿದ ಸಾವಿರ
ಜಟಿಲ ಪ್ರಶ್ನೆಗಳನ್ನ
ನೀರವತೆಯಾ ಮನದಲ್ಲೇ
ಇರಿಸಿ ಮಲಗಿದ್ದೆನೆ

ನಿದ್ದೆಗೆಟ್ಟ ಪ್ರಶ್ನೆಗಳಿಗೆ
ಎಚ್ಚರಿಕೆಯಿಂದ
ಹುಡುಕಿದರೆ
ಉತ್ತಮ  ಉತ್ತರ
ದೊರಕದು  ಇಂದು

ಪ್ರಶ್ನೆಗಳೇ ಯಾಕೆ
ಉತ್ತರ ಹುಡುಕಿ
ಅಲೆಯಬೇಕು
ಬದಲಾದ ಕಾಲಕ್ಕೆ
ಉತ್ತರವೇ ಹುಡುಕಲಿ
ಬೇಕಿದ್ದ  ಪ್ರಶ್ನೆಗಳ ಎಂದು

ಸದ್ಯಕ್ಕೆ ಪ್ರಶ್ನೆಗಳು
ಪ್ರಶ್ನೆಗಳಾಗಿಯೇ
ಉಳಿದುಕೊಳ್ಳಲಿ
ಸಂಶಯಾಸ್ಪದ ಸುಳ್ಳು
ಉತ್ತರ ಸಿಕ್ಕು
ನಾ ಏನಾ ಮಾಡಲಿ

ಮುಂದೊಂದು ದಿನ
ತಬ್ಬಿಬ್ಬಾದ  ಉತ್ತರಗಳು
ಹುಡುಕುವುದು 
ಪ್ರಮುಖ ಪ್ರಶ್ನೆಗಳನ್ನ.. 
ತನಗೆ ತಾನೇ ಸರಿಯಾದ
ಅರ್ಥವ ಅರಿಯುತ್ತಾ 

ಅಲ್ಲಿಯ ವರೆಗೂ
ಮತಿಗೇಡಿ ಪ್ರಶ್ನೆಗಳಿಗೆ
ಮೌನವನ್ನೇ ಉತ್ತರವಾಗಿರಿಸಿದ್ದೆನೆ

।।ಕಾಲಯಾ ತಸ್ಮೈ ನಮಃ।।
  #ಲಕ್ಕಿ_ಗರ್ಲ್ 

Monday 23 May 2016

ಮತ್ತೆರಡು ಸಾಲುಗಳು "#ಸಂಪದ_ಸಾಲು" ಮಾಸ ಪತ್ರಿಕೆಯಲ್ಲಿ ಓಡಾಡ್ತಿವೆ #ಲಕ್ಕಿ_ಗರ್ಲ್

" #ಕಾಲ "

ಎಲ್ಲರಿಗೂ ನೋವು ಕೊಟ್ಟೇಕೊಡುತ್ತದೆ...,
ಏಕೆಂದರೆ ಗಡಿಯಾರದಲ್ಲಿ ಇರೋದು '
ಮುಳ್ಳುಗಳು..
ಹೂವುಗಳಲ್ಲ !!!

#ಕಾಲಾಯಾಂ_ತಸ್ಮೈ_ನಮಃ

#ಲಕ್ಕಿ_ಗರ್ಲ್




ಕತ್ತಲೆಯಲ್ಲಿ
ಕರಿ ನೆರಳು
ಕಂಡರೆ
ದೂರದಲ್ಲೆಲ್ಲೊ
ಬೆಳಕಿನ
ಕಿರಣದ
ಮೂನ್ಸೂಚನೆ
ಇದೆ ಎಂದರ್ಥ

#ಹಾಗೇ_ಸುಮ್ಮನೇ #ಸಂಭಾಷಣೆ heart emoticon

ಲಕ್ಕಿ : ಓಯ್ ಹುಡ್ಗ
ಹುಡ್ಗ : ಏನೇ
ಲಕ್ಕಿ : ನಂಗೆ ಆ ಚಿಟ್ಟೆ ಹಿಡ್ಕೊಡೋ
ಹುಡ್ಗ : ಸುಮ್ಕಿರೆ ಲೇ ಏನ್ ನಿಂದು ತಲೆಹರಟೆ
ಲಕ್ಕಿ : unsure emoticon ಹೋಗೋ ಹೇಟ್ ಯು
ಹುಡ್ಗ : ಅಯ್ಯೋ ಕೋಪ ಮಾಡ್ಕೊಳ್ಬೇಡ್ವೆ
ಲಕ್ಕಿ : ಅದೆಲ್ಲ ಗೊತ್ತಿಲ್ಲ ನಂಗ್ ಚಿಟ್ಟೆ ಬೇಕು ಅಷ್ಟೇ
ಹುಡ್ಗ : ಉಫ್ ಈ ಹುಡ್ಗಿ ಗುರ್ರ್ ..

ಎದ್ದು ಹೋದ ಮತ್ತೆ
ಸ್ವಲ್ಪ ಹೊತ್ತು ಬಿಟ್ ಬಂದು

ಹುಡ್ಗ : ಲೇ ಶೇರ್ ಇಟ್ ಆನ್ ಮಾಡೇ
ಲಕ್ಕಿ : ಯಾಕೋ
ಹುಡ್ಗ : ಲೇ ಮಾಡೇ
ಲಕ್ಕಿ: ಸರಿ frown emoticon

ಸೆಂಡಿಂಗ್-- ಫೈಲ್--- ರಿಸಿವ್ಡ್

ಲಕ್ಕಿ: ಅಯ್ಯೋ ಲೇ ನಿನ್ ಮಖ ಚಿಟ್ಟೆ ಮುಚ್ಚ ಕನ್ಝೂಸ್ ನನ್ಮಗ್ನೆ
ಚಿಟ್ಟೆ ಹಿಡ್ಕೊಡು ಅಂದ್ರೆ ಚಿಟ್ಟೆ ಫೋಟೋ ಹಿಡ್ಕೊಂಡು ಬಂದಿದಿಯಾ
ರಿಯಲಿ ಹೇಟ್ ಯು ಹೋಗೋ ಇಡಿಯಟ್

ಪೋಟೋ ಕ್ರೆಡಿಟ್ : #ಹುಡ್ಗ

#ಲಕ್ಕಿ_ಗರ್ಲ್
ಹಗಲೆಲ್ಲ
ಎಷ್ಟೇ
ಉರಿದರು
ಉರಿಸಿದರು
ನೇಸರ ..
ಇಳಿಸಂಜೆ
ಹೊರಡುವ
ಹೊತ್ತು
ಅವನಿಲ್ಲದೆ
ಮೂಡುವುದು
ಮನದ
ಮೂಲೆಯಲ್ಲಿ
ಹೇಳತೀರದ
ಬೇಸರ
‪#‎ಹಾಗೇ_ಸುಮ್ಮನೇ‬


ಅವನದೇನು
ತಪ್ಪಿಲ್ಲ ಬಿಡು
ನಾಲ್ಕಾರು
ಜನರಲ್ಲಿ
ಒಬ್ಬಳಾಗಿಸಿ
ಕಡೆಗಣಿಸಿದ.

ಶ್ರೇಷ್ಠ
ಸ್ಥಾನದಲಿರಿಸಿ
ಅತಿಯಾಗಿ
ಅಭಿಮಾನಿಸಿದ್ದು
ನಾನೇ
#ಹಾಗೇ_ಸುಮ್ಮನೇ
#ಲಕ್ಕಿ_ಗರ್ಲ್
#‎ಹಾಗೇ_ಸುಮ್ಮನೇ‬ ಬೆತ್ತಲೆ ಜಗತ್ತಿನಲ್ಲಿ ಬಟ್ಟೆ ತೊಟ್ಟವರ ದೂರಿದರು
ಬೆತ್ತಲಾಗಲಿಲ್ಲವೆಂದು
ಎತ್ತೆಸೆದರು
ಅಕ್ಕಿಯ
ಗುಂಪಿನ
ನಡುವೆಯಿದ್ದ
ಒಂಟಿ ಭತ್ತವ..
ನಮ್ಮಿಬ್ರ
ಸಂಬಂಧನ
ಕೆಸರು
ಅಂದ್ರು ....
ಅವರಿಗೇನು
ಗೊತ್ತು
ಕೆಸರಲ್ಲೇ
ಅರಳೋದು
ಸುಂದರ
ಕಮಲ
ಅಂತ...
‪#‎ಲಕ್ಕಿ_ಗರ್ಲ್‬
#‎ಹುಡ್ಗ‬
ಕನಸಿನ
ಮಳೆಯು
ಜಾರುತಿದೆ
ಹನಿಯಾಗಿ..

ನೀ
ಇಲ್ಲದ
ಕನವರಿಕೆಯಲ್ಲಿ
ಒಂಟಿಯಾಗಿ..
‪#‎ಹಾಗೇ_ಸುಮ್ಮನೇ‬ ಮಳೆ ನಿಂತು ಹೋದಮೇಲೆ
‪#‎ಲಕ್ಕಿ_ಗರ್ಲ್‬
#‎ಹಾಗೇ_ಸುಮ್ಮನೇ‬ ಕಾಡ್ತಾವೇ ನೆನ್ಪುಗಳು
‪#‎ಹುಡ್ಗ‬
ನಿನ್ನೊಡನೆಯ
ಒಡನಾಟದ
ನೆನಪು
ಕಾಡುತಿದೆ
ನೂರಾರು
ಮಾತುಗಳು
ಜೊತೆ
ಇದ್ದರು
ಮನಸ್ಸೇಕೋ
ಅನಾಥವಾಗಿದೆ
ಇಂದು
‪#‎ಲಕ್ಕಿ_ಗರ್ಲ್‬
ಮೌನವೇ
ಮುಕ್ತಾಯವಾದಮೇಲೆ
ಮಾತೊಂದು
ಉಳಿಯದು 

#ಲಕ್ಕಿ_ಗರ್ಲ್  lakki girl

Monday 4 April 2016


ಅವನಿಗಾಗಿ
ಕಾದ ಬಿರು ಬಿಸಿಲಿನಲ್ಲಿ
ಮುಸ್ಸಂಜೆ ಮಳೆಯಲ್ಲಿ
ಹಿಡಿದ ಕೊಡೆ ನೆರಳಲ್ಲಿ
ನಿಂತ ನೀರಲ್ಲಿ
ಕಂಡಿತು
‪#‎ಹಾಗೇ_ಸುಮ್ಮನೇ‬
‪#‎ಅವಳ_ಪ್ರತಿಬಿಂಬ‬




"ಸಂಪದ ಸಾಲು" ಮಾಸ ಪತ್ರಿಕೆಯಲ್ಲಿ ಲಕ್ಕಿ ಗರ್ಲ್ ಳ ಎರಡು ಸಾಲುಗಳು ಹರಿದಾಡಿವೆ 


#ಕಾಡ್ತಾವೆ_ನೆನ್ಪುಗಳು

ಅಂಬರದ
ತುಂಬಾ
ನೇಸರನದೆ
ಆಡಂಬರ
ರಣಬಿಸಿಲಿಗೂ
ಮಣೆಹಾಕದೆ
ಅವನ ನೆನಪು
ತಂದಿದೆ
ವಿರಹದ
ಬೇಸರ 


#‎ಹಾಗೇ_ಸುಮ್ಮನೇ‬ ಬಣ್ಣದ ಕತ್ತಲು
ಕಾಣುವೆವು
ಬಣ್ಣ ಬಣ್ಣದ
ಕನಸುಗಳ
ಕತ್ತಲಲ್ಲಿ..
ಕನಸುಗಳ
ಬಣ್ಣ
ಮಾಸುವುದು
ಬೆಳಕಿನ
ಸಾಮ್ರಾಜ್ಯದಲ್ಲಿ..

#ಹಾಗೇ_ಸುಮ್ಮನೇ
#ಮಳೆ_ಇಳೆ

ಮುಸ್ಸಂಜೆಯೊಂದು
ಮೈ ನಡುಗುವ ಹಾಗೆ
ಮಳೆಯಾಗಬೇಕಿದೆ
ಒಮ್ಮೆಯಾದರು
ಬೇಸಿಗೆಯಲಿ
ಕೊಬ್ಬಿಳಿಸಲು
ಬಿಸಿಲ ಧಗೆಗೆ

#ಲಕ್ಕಿ_ಗರ್ಲ್


ಸತ್ತರು
ಸಾಂತ್ವನಿಸುವ
ನಿನ್ನ ನೆನಪಿನ
ಸುತ್ತಲೂ
ಸ್ವಾರ್ಥದ
ಸಂಬಂಧಗಳು
ಸತ್ತಂತಿವೆ
ಜೀವಂತ
ಬದುಕಿನಲಿ..
 
#ಲಕ್ಕಿ_ಗರ್ಲ್
ನೋವುಂಡ ಹೃದಯ
ಸಣ್ಣ ಮಕ್ಕಳಂತೆ
ಅದು ಹಟದಿಂದ
ಅಳಬಹುದೇ ಹೊರತು
ತನ್ನ ಭಾವನೆಗಳನು
ಹಂಚಿಕೊಳ್ಳದು

##ಲಕ್ಕಿ_ಗರ್ಲ್  lakki girl 

Friday 26 February 2016

#‎ಒಂದ್_ಮಾತ್‬
ಆದರಿಸುವ
ಆತ್ಮೀಯರು
ಅರಿವಿಗೆಬಾರರು
ಹಾದರದ
ಹಾದಿಯಲ್ಲಿರುವ
ಅತೃಪ
ಆತ್ಮಗಳಿಗೆ


#ಲಕ್ಕಿ_ಗರ್ಲ್ 
#‎ಅವಳ_ಪ್ರತಿಬಿಂಬ‬
ನಗುನಗುತಾ
ಅರಳಿ
ನಿಂತಿವೆ
ಸಾವಿರಾರು
ಕನಸ
ಕುಸುಮಗಳು
ಅವಳ
ಮನಸೆಂಬ
ಮಸಣದಲಿ 

#ಲಕ್ಕಿ_ಗರ್ಲ್ 
#‎ಅವಳ_ಪ್ರತಿಬಿಂಬ‬
ಕೈಗೆಟುಕಿದ
ದ್ರಾಕ್ಷಿಯೂ
ಹುಳಿಯಾಯಿತು
ಅವನ
ಸ್ವಾರ್ಥದ
ಸುಳ್ಳಿನ
ಸಮರ್ಥನೆಗೆ
ಕೈಗೆಟುಕದ
ದ್ರಾಕ್ಷಿಯಂತೆ..


#ಲಕ್ಕಿ_ಗರ್ಲ್ 

#‎ಹಾಗೇ_ಸುಮ್ಮನೇ‬ ಭಾವನೆಗಳಿಗೊಂದು ಭಾಷೆ
ಆಡುವ ಬಣ್ಣಬಣ್ಣದ
ಭಾಷೆಯ ನಾನರಿಯೆ
ಮುಗ್ಧತೆಯ ಮಡಿಲಲ್ಲಿ
ಮೌನವತಳೆದ ಮನವು
ಉತ್ತರಿಸುವುದು
ಕಿವಿಗೊಟ್ಟು
ಆಲಿಸೊಮ್ಮೆ
ನನ್ನ ಕಣ್ಣಭಾಷೆಗೆ
ನಿನ್ನ ಕಣ್ಣ ದಿಟ್ಟಿಸುತಾ ...


#‎ಅವಳ_ಪ್ರತಿಬಿಂಬ‬
ನಿದಿರೆ ಇಲ್ಲದೆ
ಕನವರಿಸಿದ
ಅದೆಷ್ಟೋ
ರಾತ್ರಿಗಳಿಗೂ
ನಿನ್ನದೇ
ಹೆಸರಿಟ್ಟಿರುವೆ..

#ಲಕ್ಕಿ_ಗರ್ಲ್ 

#ಹುಡ್ಗ

ನನ್ನ
ಪ್ರತಿ
ಹೆಜ್ಜೆಯ
ಗೆಜ್ಜೆ
ಸದ್ದಲೂ
ನಿನ್ನದೇ
ಪಿಸು
ಮಾತು

#ಲಕ್ಕಿ_ಗರ್ಲ್


ಮನಸ್ಸಿನಲ್ಲೇ
ಬಡಿದಾಡುತಿಹುದು
ಮೌನವಾಗಿ
ಕುರುಡು
ಪ್ರೀತಿಗಾಗಿ
#ಅವಳ_ಪ್ರತಿಬಿಂಬ
#ಲಕ್ಕಿ_ಗರ್ಲ್
#‎ಅವಳ_ಪ್ರತಿಬಿಂಬ‬
ಒಲ್ಲದ
ಮನವಿದು
ಯಾವಹಾದಿಯೋ
ಬಲ್ಲದು
ಪಾದಗಳ
ನಂಬಿಯೇ
ಸವೆಸುತಿಹುದು 

#ಲಕ್ಕಿ_ಗರ್ಲ್

ಬರೆದು,,
ಕೊಡಲಾಗದ ಪ್ರೇಮ ಪತ್ರವೇ 

ಮರೆಯಲಾಗದ ಪ್ರೇಮ ಕಾವ್ಯ
#ಲಕ್ಕಿ_ಗರ್ಲ್ 

#ಹುಡ್ಗ
ಶಾಯಿ ಬಿದ್ದ
ಖಾಲಿ ಕಾಗದ ನೀನು
ಬರೆಯಲು ಆಗದೆ
ಇರಲು ಆಗದೆ
ಪ್ರತಿಗಳಿಗೆ
ಒದ್ದಾಡುವೇನು ನಾನು

#ಲಕ್ಕಿ_ಗರ್ಲ್
#ಅವಳ_ಪ್ರತಿಬಿಂಬ
ಮೊದಮೊದಲು
ಆಕರ್ಷಣೆ
ನಂತರ
ಮಿಕ್ಕಿದೆಲ್ಲವೂ
ಬರಿ ಘರ್ಷಣೆ ಘರ್ಷಣೆ

#ಲಕ್ಕಿ_ಗರ್ಲ್

ನಗುವ
ಹಚ್ಚಹಸಿರಿಗೆ
ತಾಕದಿರಲೆಂದು
ಅವರಿವರ
ದೃಷ್ಠಿ
ಈ ಕಪ್ಪು
ಸುಂದರಿಯ
ಸೃಷ್ಠಿ

 


#ಹಂಬಲಿಸಿದೆ_ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….ಮನಾ.......

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಸಾವಿರ ಹೊಳೆಗಳು ತುಂಬಿ ಹರಿದರೂ, ಒಂದೇ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ, ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ, ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ,........ ಅಪಾರವಂತೆ..........
ಕಾಣಬಲ್ಲೆನೆ ಒಂದು ದಿನ, ಅದರೊಳು ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಜಟಿಲ ಕಾನನದ ಕುಟಿಲ ಪಥಗಳಲಿ, ಹರಿವ ತೊರೆಯು ನಾನು
ಎಂದಿಗಾದರು.... ಎಂದಿಗಾದರು.... ಎಂದಿಗಾದರು....
ಕಾಣದ ಕಡಲನು, ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ, ಹರಿವ ತೊರೆಯು ನಾನು
ಎಂದಿಗಾದರು....,ಕಾಣದ ಕಡಲನು ಸೇರಬಲ್ಲೆನಾನು
ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೇ ನಾನು
ಕರಗಬಹುದೇ ನಾನು......... ಕರಗಬಹುದೇ ನಾನು......

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್.

ಕಣ್ಣಿಗೆ ಕಂಡರು
ಕಡಲ ಸೇರದೆ
ಪರಿತಪಿಸುತಿದೆ
ನಿನಗಾಗಿ
ಹಂಬಲಿಸಿದ
ಮನವು
ಅನಾಥವಾಗಿದೆ

#ಅವಳ_ಪ್ರತಿಬಿಂಬ

ಮನೆಯಂಗಳದಲ್ಲಿ
ನಾಚಿ ನಿಂತಿತು
ಮಬ್ಬುಗತ್ತಲಲ್ಲಿ
ಮೈನೆರೆದ
ಮೊಗ್ಗು
#ಲಕ್ಕಿ_ಗರ್ಲ್

Monday 1 February 2016



#ಹಾಗೇ_ಸುಮ್ಮನೇ ಅಂತರಾಳದ ಅಳಲು 
 
ಮುಂಜಾನೆಯ 
ಮಂಜಿಗೆ  
ಮರಗಟ್ಟಿದೆ ಭಾವ
ಹೇಳಲಾರದೆ 
ಏಳಲಾರದೆ 
ತೊಳಾಲಾಡಿದೆ ನೋವ 
ರೆಕ್ಕೆ ಬಿಚ್ಚಿ 
ಅಪ್ಪಲಾರದೆ 
ಹಾರಲಾರದೆ 
ಮಿಡುಕಾಡಿದೆ ಜೀವ 
ಮೌನವಾಗಿ 
ರೋದಿಸುತ್ತಿದೆ 
ನವಿರು ಮನಸು 
ಬಣ್ಣ ಬಣ್ಣದ ಚಿಟ್ಟೆಯ 
ಸಾವಿರಾರು  ಕನಸು 
#ಲಕ್ಕಿ_ಗರ್ಲ್ lakki gal

Monday 18 January 2016


#ಮಳೆ_ಇಳೆ

ತಂಪೆರೆಯಲು
ಮಳೆಯಂತೆ
ಬರುವೆಯೆಂದು 
ಒಲವು
ಬತ್ತಿದ
ಇಳೆಯಂತೆ
ಕಾದಿರುವ
ಶ್ಯಾಮಲೆ ಇವಳೇ

ಶ್ಯಾಮಲೆ ಇವಳೇ

#ಅವಳ_ಪ್ರತಿಬಿಂಬ lakki girl


ಕುರುಡು
ಕಾಂಚಾಣದ 
ಕಾಲಿಗೆ ಸಿಕ್ಕ
ಆತ್ಮೀಯ ಭಾವಗಳು
ಬಲಿಯಾಗುತಿವೆ…

ಅತೃಪ್ತ
ಆತ್ಮಗಳ
ನಯವಂಚನೆಗೆ
ನಾಜೂಕಿನ
ನೆಪ ಒಡ್ಡಿವೆ…

ಸತ್ತರು
ಸಾಂತ್ವನಿಸುವ
ನಿನ್ನ ನೆನಪಿನ
ಸುತ್ತಲೂ
ಸ್ವಾರ್ಥದ
ಸಂಬಂಧಗಳು
ಸತ್ತಂತಿವೆ
ಜೀವಂತ
ಬದುಕಿನಲಿ..

Lakki Girl - ಲಕ್ಕಿ ಗರ್ಲ್​


#ಹಾಗೇ_ಸುಮ್ಮನೇ  #ಅವಳ_ಪ್ರತಿಬಿಂಬ

#ಹುಡ್ಗ

ನೀ 
ಕೊಟ್ಟ
ಸವಿನೆನಪಿನ
ಗುಟ್ಟನೆಲ್ಲ
ಸೆರಗತುದಿಯಲ್ಲಿ
ಗಂಟುಕಟ್ಟಿ
ಹೊದಿಕೆ
ಹೊದಿಸಿರುವೆ
ನಿನ್ನದೇ
ಕನಸಿಗೆ ಕೂಸಿಗೆ
ಬೆಚ್ಚಗಿರಲೆಂದು..
ಮರೆತು ಸಹ
ಕೊಡವಬೇಡ
ಕಳೆದುಹೋದರೆ
ಕಳುವಾದರೆ
ನಾನು ಹೊಣೆಗಾರಳಲ್ಲ....

#ಲಕ್ಕಿ_ಗರ್ಲ್

Saturday 9 January 2016


#ಅವಳ_ಪ್ರತಿಬಿಂಬ

ಅವನ
ಸಾವಿರಾರು
ಭಾವಗಳ
ಗೂಢಾರ್ಥದ
ಪದರುಗಳಲ್ಲಿನ
ಅರ್ಥಾಲಂಕಾರದಲ್ಲಿ
ಅನುಭಾವವನ್ನು
ಏಕಾಂಗಿಯಾಗಿ
ಅನುಭವಿಸಿದ
ಅನ್ವರ್ಥನಾಮ
ಶ್ಯಾಮಲೆ ಇವಳೇ

ಶ್ಯಾಮಲೆ ಇವಳೇ ಅವಳ ಪ್ರತಿಬಿಂಬ
#ಹಾಗೆ_ಸುಮ್ಮನೇ ತಪ್ಪು ಒಪ್ಪು ಅಪ್ಪು 

ಮೌನದ 
ಮನಸುಗಳು 
ಮುನಿಸಿನಿಂದಲೆ 
ಮಾತಿಗಿಳಿದು 
ಇಬ್ಬರ 
ತಪ್ಪುಗಳ 
ಒಪ್ಪಲಾರದೆ 
ಒಲವಿಗೆ 
ಸೋತು 
ಅಪ್ಪಿ ಮುದ್ದಾಡಿದವು 
#ಲಕ್ಕಿ_ಗರ್ಲ್