Thursday 31 December 2015

#ಕಾಡ್ತವೆ_ನೆನ್ಪುಗಳು

ಅವನ
ನೆನಪುಗಳೇ
ಹಾಗೇ  
ಒಂದ್ರಿಂದ  
ಮೂವತ್ತೊಂದು
ನಂಬರಿನ
ಹಾಗೇ
ವರುಷ
ಸಾವಿರಾವಾದ್ರು  
ಮತ್ತೆ ಮತ್ತೆ
ಮರುಕಳಿಸುವ
ತಿಂಗಳ
ದಿನಾಂಕದ ಹಾಗೇ

#ಲಕ್ಕಿ_ಗರ್ಲ್

Tuesday 29 December 2015


ಕೋಪದಿ ಕಿರುಚಾಡಿದ ನಿನ್ನಯ  ಮಾತು
ಕತ್ತಲಾಯಿತು ನನಗೆ ಮಧ್ಯಾಹ್ನದ ಹೊತ್ತು
ಸಹಿಸಲಾಗುತ್ತಿಲ್ಲ ಈ ವಿರಹದ  ನೋವ
ನಿನ್ನೊಂದಿಗೆ ಬೆಸೆದಿತ್ತು ನನ್ನೀ  ಜೀವ

ಲಕ್ಕಿ ಗರ್ಲ್
lakki girl 

Monday 28 December 2015



ಹೊಸಹೊಸ
ಹೂವ
ಹುಡುಕುತಾ
ಹಾರಡುತಿದೆ
ಹಾದರದ
ಹಾದಿಯಲ್ಲಿ
ಸಿಕ್ಕ ಸಿಕ್ಕ
ಹೂವಿನ
ಭಾವನೆಗಳ
ಹಾತ್ಯಾಚಾರವೆಸಗಲು
ಅಲ್ಲೊಂದು
ಧುಂಬಿ
ಅವನಂತೆ ..


 ಲಕ್ಕಿ ಗರ್ಲ್   - lakki Girl

Tuesday 22 December 2015



ಹುಡ್ಗ  miss you :(

ಬರೆಯಲಾರದೆ
ಒಂದು
ಕವಿತೆ
ಅವನಿಲ್ಲದ
ಪದಗಳಲ್ಲಿ
ಮೌನವಾಗಿ
ಕುಳಿತೆ..
-ಲಕ್ಕಿ ಗರ್ಲ್ ( lakki girl )
 

Wednesday 16 December 2015



            ªÀÄzÀªÉÃjzÀ
¥Àj¹ÜAiÀÄÄ
PÉÊ «ÄÃj
¤0wzÉ
PÉʯÁUÀzÀªÀgÀ
ºÉUÀ¯Éj
PÀĽvÀÄ
PÉPÀÌj¹
£ÉÆÃqÀÄvÁÛ
ClÖºÁ¸ÀªÀ
ªÉÄÃgÉ¢zÉ. . .

CªÀiÁAiÀÄPÀgÀ £ÉÆêÀÅ
C¸ÁAiÀÄPÀgÀ ¸ÁªÀÅ
C£ÀĪÀiÁ¤¸À¢j
¥Àj¹ÜAiÀÄ UÉÆ0¨ÉUÀ¼ÀÄ £ÁªÀÅ..                    

 ®QÌ UÀ¯ïð 

Tuesday 15 December 2015


ಬಿಳುತಿದೆ
ಮಳೆಹನಿಯು
ಕಣ್ಣಹನಿಯಂತೆ
ಅವನದೇ
ನೆನಪನು
ನೆನೆದು
ನೆನೆಯುತ್ತಾ

 ಲಕ್ಕಿ ಗರ್ಲ್ 


Friday 11 December 2015


 #ಹಾಗೇ_ಸುಮ್ಮನೇ  ಕಮರಿದ ಕನಸು

ನಿನ್ನ ಕಟು
ಮುನಿಸಿಗೆ
ತತ್ತರಿಸಿದ
ನನ್ನ ಮುಗ್ಧ
ಮನಸು
ಬಲಿಯಾಯಿತು
ಭಾವನೆಗಳೋತ್ತ
ಸಾವಿರ ಸಾವಿರ
ಕನಸು

ಲಕ್ಕಿ ಗರ್ಲ್

Thursday 10 December 2015

#ಹಾಗೇ_ಸುಮ್ಮನೇ ನೆನೆ ನೆನೆದು

#ಹುಡ್ಗ

ನಾ
ನಿಂತೆ
ಒಬ್ಬಳೇ
ಮಳೆಯಲ್ಲಿ
ನಿನ್ನ
ನೆನೆದು
ನೆನೆದು

#ಲಕ್ಕಿ_ಗರ್ಲ್ 

lakshmi lakki gal

#ಹಾಗೇ_ಸುಮ್ಮನೇ ಉಸಿರ ಬಸಿರು

ಸೋತ
ನಿಟ್ಟುಸಿರಿನ
ಬಸಿರೇ
ಬಣ್ಣ
ಬಣ್ಣದ
ಬಬ್ಬಲ್ಸಗಳು

#ಲಕ್ಕಿ_ಗರ್ಲ್ 

lakki gal 


#ಹಾಗೇ_ಸುಮ್ಮನೇ ಅಂತರಾಳದ ಅಪ್ಪುಗೆ

#ಹುಡ್ಗ

ಕಳೆದು
ಹೋಗುತಿರುವೆ
ಕಾಣದ
ಒಲವಿನ
ಕಡಲಲೆಗಳಲ್ಲಿ
ಬರಸೆಳೆದಪ್ಪಿಕೊ
ನಿನ್ನ
ಎದೆಯಾಂತರಾಳದ
ಸುಳಿಯಲ್ಲಿ

#ಲಕ್ಕಿ_ಗರ್ಲ್ 
Lakki girl

#ಹಾಗೇ_ಸುಮ್ಮನೇ ಸಣ್ಣ ಹೃದಯವಿದು ತುಂಬಾ ನಡುಗುವುದು
#ಹುಡ್ಗ

ನನ್ನೀ
ಪುಟ್ಟ
ಹೃದಯ
ಪಟ್ಟುಹಿಡಿದು
ಬಿಕ್ಕಳಿಸುತಿದೆ
ಕಡಲಲೆಗಳಂತೆ..
ನೀನಿರದ
ಮುಂಜಾನೆಯ
ಕನಸುಗಳ
ತೀರದಲ್ಲಿ..

#ಲಕ್ಕಿ_ಗರ್ಲ್

Thursday 3 December 2015

#‎ಹಾಗೇ_ಸುಮ್ಮನೇ‬ ಮುಸ್ಸಂಜೆ ಕಾಡ್ತಾವೆ ನೆನ್ಪುಗಳು
‪#‎ಹುಡ್ಗ‬
ಇಳಿಸಂಜೆಯ
ಮಳೆ
ಹನಿಯು
ಜಿನುಗುತ್ತಿದೆ
ಕಣ್ಣೀರ
ಹನಿಯಂತೆ
ನಿನ್ನದೇ
ನೆನಪಿನಲಿ
ನೆನಪುಗಳೆಲ್ಲ
ನೆನೆಯುವಂತೆ..

#‎ಹಾಗೇ_ಸುಮ್ಮನೇ‬ ದುನಿಯಾ ಕಾಷ್ಲೀ
ಕಂಡ
ಕಂಡಲ್ಲೆಲ್ಲ
ಕಾಣಿತಿಹುದು
ಕಲಬೆರಕೆ
ಪ್ರೀತಿ..

ಪ್ರೀಯಾಗಿ
ಪಡೆದವರೇಲ್ಲ
ಪಡುತಿಹರು
ಫಜೀತಿ...
‪#‎ಲಕ್ಕಿ_ಗರ್ಲ್
#‎ಹಾಗೇ_ಸುಮ್ಮನೇ‬ ಮನದ ಮಾತು
ಮನ
ಯಾವಾಗ್ಲು
ಕಾಣದ
ಕಡಲಿಗೆ
ಹಂಬಲಿಸಲ್ಲ ...
ಕೆಲವೊಮ್ಮೆ
ಕಾಣುವ
ಕಡಲಿಗೂ
ಹಂಬಲಿಸುತ್ತೆ ...

 #‎ಲಕ್ಕಿ_ ಗರ್ಲ್  

 

#ಹಾಗೇ_ಸುಮ್ಮನೇ #ಕೆಂಡಸಂಪಿಗೆ
ಇಳಿಜಾರು ಹಾದಿಯಿದು ಮುಗಿದಂತೆ ಕಾಣುವುದು
ಹಿಂತಿರುಗಿ ನೋಡಿದರೆ ಅಲ್ಲೊಂದು ತುದಿ,
ಮುಂತಿರುಗಿ ಓಡಿದರೆ ಮುಂದೊಂದು ತುದಿ..!
ಅಂಗಾಲಿಗೆ ಭೂಮಿಯನ್ನೆ ಕಟ್ಟಿಕೊಂಡ ಕಾಲು,
ಎಲ್ಲಿ ಹೋದರೇನು? ಎಲ್ಲಿ ಬಂದರೇನು?
ಎಲ್ಲಿ ನಿಂತರೇನು? ಎಲ್ಲಿ ಕುಂತರೇನು?
ಎರಡು ತುದಿಗಳ ನಡುವೆ ಗೆರೆಯನೆಳೆದರೆ ದಾರಿ
ನೂರು ಗುರಿಗಳ ನಡುವೆ ಅಡಗಿ ಕೂತಿದೆ ಗೋರಿ.
ಮುಗಿಯೆತೆನ್ನುವ ಪಯಣ ಇಲ್ಲ ಎಲ್ಲೂ,
ಆದಿ ಅಂತ್ಯಗಳೆರಡು ಸುಳ್ಳೆ ಸುಳ್ಳು.
ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು,
ಎಲ್ಲಿ ನಿಂತರೇನು? ಎಲ್ಲಿ ಕುಂತರೇನು?
ಎಲ್ಲಿ ಹೋದರೇನು? ಎಲ್ಲಿ ಬಂದರೇನು?
ಊರು ಊರಿನ ನಡುವೆ ಟಾರು ಹುಯ್ದವರಾರು?
ಮೈಲಿಗಲ್ಲನು ಊರಿ ಊರು ಅಂದವರಾರು?

ಯಾರ ತೋರ ಬೆರಳ ನಂಬಿ ಬಂದೆವು?
ನಾವೇ ನಮ್ಮ ನೆರಳ ಎಂದೋ ಕೊಂದೆವು!

ಎಲ್ಲಾ ಪಯಣದ ದಿಕ್ಕು ಮಣ್ಣು ಎಂದಮೇಲೆ,
ಜೀವವಿದ್ದರೇನು? ಇಲ್ಲದಿದ್ದರೇನು?
ದಾರಿ ಎಂದರೇನು? ದಿಕ್ಕು ಎಂದರೇನು?

-ಯೋಗರಾಜ್ ಭಟ್

#ಲಕ್ಕಿ_ಗರ್ಲ್
#‎ಹಾಗೇ_ಸುಮ್ಮನೇ‬ ನಂಬಿದ್ರೇ ನಂಬಿ.. ಬಿಟ್ರೇ ಬಿಡಿ..
ನಂಬಿಕೆಗೂ
ಚುಚ್ಚುವುದು
ಮುಳ್ಳು..
ಆತ್ಮೀಯರು
ಹೇಳಿದಾಗ
ಸುಳ್ಳು..

#‎ಹಾಗೇ_ಸುಮ್ಮನೇ‬ ಖಾಲಿ ಖಾಲಿ
‪#‎ಹುಡ್ಗ‬
ಖಾಲಿ ಪುಟಗಳಲೆಲ್ಲ
ನಿನ್ನದೇ
ಹೆಸರು
ಬರೆಯುತ್ತಾ
ಬರೆಯುತ್ತಾ
ನೋಡಿದರೆ
ಕೊನೆಗೆ
ಪುಟಗಳೆಲ್ಲ ಖಾಲಿ

#‎ಹಾಗೇ_ಸುಮ್ಮನೇ‬ ಆಟಿಟ್ಯೂಡ್
ನನಗೋ
ಬಲು
ಜಂಭ
ನಾನೇ
ಇರುವೆನು
ನನ್ನವನ
ಕವನ
ಕವಿತೆ
ಕನಸು
ನೆನೆಪು
ವಿರಹಗೀತೆಯ
ತುಂಬಾ

#‎ಹಾಗೇ_ಸುಮ್ಮನೇ‬ ಸತ್ಯ ಸಂಗತಿ
ಕೊಳೆತ
ಶವದಂತೆ
ಎಷ್ಟೇ
ಬಚ್ಚಿಟ್ಟರು
ದುರ್ನಾತ
ಮೂಗಿಗೆರುವುದು
ಸುಳ್ಳು..

ಕಸ್ತೂರಿ
ಪರಿಮಳದಂತೆ
ಎಷ್ಟೇ
ಬಚ್ಚಿಟ್ಟರು
ಸುಗಂಧದ
ಘಮಲು
ಬೀರುವುದು
ಸತ್ಯ..
‪#‎ಲಕ್ಕಿ_ಗರ್ಲ್‬

 True Lie
#‎ಹಾಗೇ_ಸುಮ್ಮೆನೇ‬ ಮನದ ಮನೆ
‪#‎ಹುಡ್ಗ‬
ಯಾರೋ
ಬಂದು
ಇದ್ದು
ಎದ್ದು
ಹೋಗುವ
ಬಾಡಿಗೆ
ಮನೆಯಲ್ಲ
ಗೆಳೆಯ ..
ಸ್ವಾತಿಮುತ್ತ
ಬಚ್ಚಿಟ
ಕಡಲಾಳದ
ಕಪ್ಪೆಚಿಪ್ಪಿನ
ಅರಮನೆಯಂತೆ
ಈ ನನ್ನ
ಹೃದಯ

#‎ಹಾಗೇ_ಸುಮ್ಮನೇ‬ ಮನಸುಗಳ ಮಾತು
ಮುಗ್ಧ
ಮನಸ್ಸಿಗೋ
ಎಲ್ಲವ
ಕ್ಷಮಿಸಿ
ಒಪ್ಪಿ
ಅಪ್ಪುವಾಸೆ...
ಮತ್ತದೆ
ಸ್ವಾರ್ಥಕ್ಕೆ
ಮಣಿಯದ
ಬಿಗುಮಾನ
ಹೆಜ್ಜೆ ಹಾಕುತ್ತಿದೆ
ನಿಟ್ಟುಸಿರಿನ
ನಿರಾಸೆ


Dream
 
#‎ಹಾಗೇ_ಸುಮ್ಮನೇ‬ ಕನಸುಗಳ ಕಳ್ಳ
ಕನವರಿಸುವ
ಕನಸುಗಳ
ಸುಲಿಗೆ
ಮಾಡುತಿಹುದು
ಕಣ್ಣ ಹನಿಯೊಂದು
ನಿದಿರೆಯ
ಯಾಮಾರಿಸಿ..
Miss you 
#‎ಹಾಗೇ_ಸುಮ್ಮನೇ‬ ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಒಲವೆಂಬ
ಮಗುವ
ಹೆರಲಾರದ
ಬಂಜೆ
ನೀನಿರದ
ಈ ಮುಸ್ಸಂಜೆ
#‎ಹಾಗೇ_ಸುಮ್ಮನೇ‬ ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ಚಿಂತೆಯಿಲ್ಲದವನಿಗೆ
ಸಂತೆಯಲ್ಲೂ
ನಿದಿರೆಯಂತೆ
ಭಾವನೆಗಳಿಗೆ
ಇಟ್ಟ ಬೆಂಕಿಯಂತೆ

ಅವಳಾಡುವ
ಚಾಲಾಕಿ ಮಾತುಗಳೆಲ್ಲ
ಹೊಟ್ಟೆಗೆ ಹಿಟ್ಟಿಲ್ಲದಿದ್ರೂ
ಜುಟ್ಟಿಗೆ ಮಲ್ಲಿಗೆ ಇಟ್ಟಂತೆ
ಅವ ಉಣಬಡಿಸಿದ
ಕಲಬೆರಕೆ ಪ್ರೀತಿಗೆ
ತಾಯಿ ಹಾಲಲ್ಲು
ವಿಷವಂತೆ
ಸಂಬಂಧವ
ಬಳಸಬೇಕು
ಅಗತ್ಯಕ್ಕೆ ತಕ್ಕಂತೆ
ಅತೀಯಾದರೆ
ಅಮೃತವು ವಿಷವಂತೆ
ಅನಾಚಾರದ ಬದುಕಿಗೆ
ಬೃಂದಾವನದ ಪರದೆಯಂತೆ
ಬೆಕ್ಕು ಕಣ್ಮುಚ್ಚಿ
ಹಾಲು ಕುಡಿದಂತೆ
ಹಾಸಿಗೆಯೇ ಇಲ್ಲದವರು
ಕಾಲು ಚಾಚಿದಂತೆ
ಮೂರು ಬಿಟ್ಟವರು
ಊರಿಗೆ ದೊಡ್ಡವರಂತೆ
ಹಾಗೇ ಸುಮ್ಮನೇ
ಜಗವೇ ಮಾಯಾ
ಬದುಕೆಲ್ಲ ಅಯೋಮಯ
‪#‎ಲಕ್ಕಿ_ಗರ್ಲ್‬
#‎Celebrate_the_Beauty_of_Light‬
ಸ್ವಚ್ಛ
ಮನದಿ
ಹಚ್ಚಿರಿ
ಒಲವಿನ
ಹಣತೆ
ಬೆಳಗುತಲಿರಲಿ
ನಿಮ್ಮ
ಯಶಸ್ಸಿನ
ಪ್ರಕರತೆ 


ಲಕ್ಕಿ ಗರ್ಲ್  
Deepavali
..

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ...

ಸಾಹಿತ್ಯ – ಬಿ.ಆರ್.ಲಕ್ಷ್ಮಣರಾವ್

Mother Love 
#ಹಾಗೇ_ಸುಮ್ಮನೇ ಈ ಭೂಮಿ ಬಣ್ಣದ ಬುಗುರಿ

ಮಾಸುತಿದೆ
ಬಣ್ಣ,
ಬುಗುರಿ
ತಿರುಗದೆ
ನಿತ್ರಾಣದಿ
ನಿಂತು
ಸುರಿಸಿದ
ಕಣ್ಣೀರಿಗೆ

#ಲಕ್ಕಿ_ಗರ್ಲ್ 


#‎ಹಾಗೇ_ಸುಮ್ಮನೇ‬ ಮುಂಜಾನೆ ಮಂಜಿನ ಮಾತು
ಮುಂಜಾನೆ
ಕನವರಿಕೆಯಲ್ಲಿ
ನಿನ್ನದೇ
ಪ್ರತಿರೂಪ..
ನಾ ಕಂಡ
ಕನಸೇಲ್ಲ
ಅಪರೂಪ..
#‎ಅಮ್ಮ‬
ಉಸಿರಿಗೆ
ಉಸಿರಾಗಿರುವ
ನಿನ್ನ
ಹೆಸರೇ
ನನ್ನ
ಬದುಕಿಗೆ
ಆಸರೆ.....

#‎ಹಾಗೇ_ಸುಮ್ಮನೇ‬ ಕಾಡ್ತಾವೆ ನೆನ್ಪುಗಳು
‪#‎ಹುಡ್ಗ‬
ಇಳಿಸಂಜೆ
ನಿನ್ನ
ಮೌನದ
ತಂಗಾಳಿ
ಮನವ
ತೀಡಿತು..
ಮರೆತ
ನೆನಪೆಲ್ಲ
ಒಟ್ಟೊಟ್ಟಿಗೆ
ಕಾಡಿತು..