Friday 26 February 2016

#‎ಒಂದ್_ಮಾತ್‬
ಆದರಿಸುವ
ಆತ್ಮೀಯರು
ಅರಿವಿಗೆಬಾರರು
ಹಾದರದ
ಹಾದಿಯಲ್ಲಿರುವ
ಅತೃಪ
ಆತ್ಮಗಳಿಗೆ


#ಲಕ್ಕಿ_ಗರ್ಲ್ 
#‎ಅವಳ_ಪ್ರತಿಬಿಂಬ‬
ನಗುನಗುತಾ
ಅರಳಿ
ನಿಂತಿವೆ
ಸಾವಿರಾರು
ಕನಸ
ಕುಸುಮಗಳು
ಅವಳ
ಮನಸೆಂಬ
ಮಸಣದಲಿ 

#ಲಕ್ಕಿ_ಗರ್ಲ್ 
#‎ಅವಳ_ಪ್ರತಿಬಿಂಬ‬
ಕೈಗೆಟುಕಿದ
ದ್ರಾಕ್ಷಿಯೂ
ಹುಳಿಯಾಯಿತು
ಅವನ
ಸ್ವಾರ್ಥದ
ಸುಳ್ಳಿನ
ಸಮರ್ಥನೆಗೆ
ಕೈಗೆಟುಕದ
ದ್ರಾಕ್ಷಿಯಂತೆ..


#ಲಕ್ಕಿ_ಗರ್ಲ್ 

#‎ಹಾಗೇ_ಸುಮ್ಮನೇ‬ ಭಾವನೆಗಳಿಗೊಂದು ಭಾಷೆ
ಆಡುವ ಬಣ್ಣಬಣ್ಣದ
ಭಾಷೆಯ ನಾನರಿಯೆ
ಮುಗ್ಧತೆಯ ಮಡಿಲಲ್ಲಿ
ಮೌನವತಳೆದ ಮನವು
ಉತ್ತರಿಸುವುದು
ಕಿವಿಗೊಟ್ಟು
ಆಲಿಸೊಮ್ಮೆ
ನನ್ನ ಕಣ್ಣಭಾಷೆಗೆ
ನಿನ್ನ ಕಣ್ಣ ದಿಟ್ಟಿಸುತಾ ...


#‎ಅವಳ_ಪ್ರತಿಬಿಂಬ‬
ನಿದಿರೆ ಇಲ್ಲದೆ
ಕನವರಿಸಿದ
ಅದೆಷ್ಟೋ
ರಾತ್ರಿಗಳಿಗೂ
ನಿನ್ನದೇ
ಹೆಸರಿಟ್ಟಿರುವೆ..

#ಲಕ್ಕಿ_ಗರ್ಲ್ 

#ಹುಡ್ಗ

ನನ್ನ
ಪ್ರತಿ
ಹೆಜ್ಜೆಯ
ಗೆಜ್ಜೆ
ಸದ್ದಲೂ
ನಿನ್ನದೇ
ಪಿಸು
ಮಾತು

#ಲಕ್ಕಿ_ಗರ್ಲ್


ಮನಸ್ಸಿನಲ್ಲೇ
ಬಡಿದಾಡುತಿಹುದು
ಮೌನವಾಗಿ
ಕುರುಡು
ಪ್ರೀತಿಗಾಗಿ
#ಅವಳ_ಪ್ರತಿಬಿಂಬ
#ಲಕ್ಕಿ_ಗರ್ಲ್
#‎ಅವಳ_ಪ್ರತಿಬಿಂಬ‬
ಒಲ್ಲದ
ಮನವಿದು
ಯಾವಹಾದಿಯೋ
ಬಲ್ಲದು
ಪಾದಗಳ
ನಂಬಿಯೇ
ಸವೆಸುತಿಹುದು 

#ಲಕ್ಕಿ_ಗರ್ಲ್

ಬರೆದು,,
ಕೊಡಲಾಗದ ಪ್ರೇಮ ಪತ್ರವೇ 

ಮರೆಯಲಾಗದ ಪ್ರೇಮ ಕಾವ್ಯ
#ಲಕ್ಕಿ_ಗರ್ಲ್ 

#ಹುಡ್ಗ
ಶಾಯಿ ಬಿದ್ದ
ಖಾಲಿ ಕಾಗದ ನೀನು
ಬರೆಯಲು ಆಗದೆ
ಇರಲು ಆಗದೆ
ಪ್ರತಿಗಳಿಗೆ
ಒದ್ದಾಡುವೇನು ನಾನು

#ಲಕ್ಕಿ_ಗರ್ಲ್
#ಅವಳ_ಪ್ರತಿಬಿಂಬ
ಮೊದಮೊದಲು
ಆಕರ್ಷಣೆ
ನಂತರ
ಮಿಕ್ಕಿದೆಲ್ಲವೂ
ಬರಿ ಘರ್ಷಣೆ ಘರ್ಷಣೆ

#ಲಕ್ಕಿ_ಗರ್ಲ್

ನಗುವ
ಹಚ್ಚಹಸಿರಿಗೆ
ತಾಕದಿರಲೆಂದು
ಅವರಿವರ
ದೃಷ್ಠಿ
ಈ ಕಪ್ಪು
ಸುಂದರಿಯ
ಸೃಷ್ಠಿ

 


#ಹಂಬಲಿಸಿದೆ_ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….ಮನಾ.......

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಸಾವಿರ ಹೊಳೆಗಳು ತುಂಬಿ ಹರಿದರೂ, ಒಂದೇ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ, ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ, ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ,........ ಅಪಾರವಂತೆ..........
ಕಾಣಬಲ್ಲೆನೆ ಒಂದು ದಿನ, ಅದರೊಳು ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಜಟಿಲ ಕಾನನದ ಕುಟಿಲ ಪಥಗಳಲಿ, ಹರಿವ ತೊರೆಯು ನಾನು
ಎಂದಿಗಾದರು.... ಎಂದಿಗಾದರು.... ಎಂದಿಗಾದರು....
ಕಾಣದ ಕಡಲನು, ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ, ಹರಿವ ತೊರೆಯು ನಾನು
ಎಂದಿಗಾದರು....,ಕಾಣದ ಕಡಲನು ಸೇರಬಲ್ಲೆನಾನು
ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೇ ನಾನು
ಕರಗಬಹುದೇ ನಾನು......... ಕರಗಬಹುದೇ ನಾನು......

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್.

ಕಣ್ಣಿಗೆ ಕಂಡರು
ಕಡಲ ಸೇರದೆ
ಪರಿತಪಿಸುತಿದೆ
ನಿನಗಾಗಿ
ಹಂಬಲಿಸಿದ
ಮನವು
ಅನಾಥವಾಗಿದೆ

#ಅವಳ_ಪ್ರತಿಬಿಂಬ

ಮನೆಯಂಗಳದಲ್ಲಿ
ನಾಚಿ ನಿಂತಿತು
ಮಬ್ಬುಗತ್ತಲಲ್ಲಿ
ಮೈನೆರೆದ
ಮೊಗ್ಗು
#ಲಕ್ಕಿ_ಗರ್ಲ್

Monday 1 February 2016



#ಹಾಗೇ_ಸುಮ್ಮನೇ ಅಂತರಾಳದ ಅಳಲು 
 
ಮುಂಜಾನೆಯ 
ಮಂಜಿಗೆ  
ಮರಗಟ್ಟಿದೆ ಭಾವ
ಹೇಳಲಾರದೆ 
ಏಳಲಾರದೆ 
ತೊಳಾಲಾಡಿದೆ ನೋವ 
ರೆಕ್ಕೆ ಬಿಚ್ಚಿ 
ಅಪ್ಪಲಾರದೆ 
ಹಾರಲಾರದೆ 
ಮಿಡುಕಾಡಿದೆ ಜೀವ 
ಮೌನವಾಗಿ 
ರೋದಿಸುತ್ತಿದೆ 
ನವಿರು ಮನಸು 
ಬಣ್ಣ ಬಣ್ಣದ ಚಿಟ್ಟೆಯ 
ಸಾವಿರಾರು  ಕನಸು 
#ಲಕ್ಕಿ_ಗರ್ಲ್ lakki gal