Sunday 8 January 2017



ಸಂಭ್ರಮದ  ಮದದಲ್ಲಿ 
ನಮ್ಮವರೆಂದು ಬೀಗಿದ  
ಬಿಗುಮಾನದ ಭ್ರಮೆಯ 
ಮಾನ ಕಳೆದು 
ಬಯಲಿಗೆಳೆದಿಹರು 
ಅದೇ ನಮ್ಮವರು 

ಜೀವನಕ್ಕೆ  ಜೀವದಂತಿದ್ದ 
ಬಂಧಗಳೆಲ್ಲ 
ಕೊಟ್ಟ ಮಾತಿಗೆ 
ಇಟ್ಟ  ಆಣೆಗೆ  
ಹುಸಿನಗೆ ಬೀರಿ 
ಬಿರುಕು ಬಿಟ್ಟು 
ಬರಡಾಗಿಹರು 

ಭದ್ರತೆ ಇಲ್ಲದ ಬದುಕು 
ಎತ್ತಣದಿಂದೆತ್ತ  
ಸಾಗುವುದೋ 
ಅರಿತವರ್ಯ್ಯಾರು 

ಇದ್ದಷ್ಟು ದಿನ ಇದ್ದು ಬಿಡಬೇಕು 
ಭವಬಂಧವ  ತೊರೆದು 
ಬಂದದ್ದು ಬಂದಹಾಗೆ 
ಅನಿವಾರ್ಯದಿ ಅನುಭವಿಸಿ 
ಬದುಕಿನಲ್ಲಿ ಬದಲಾದ 
ಬದುಕನ್ನು 
ಬದುಕಿಬಿಡಬೇಕು
 ಸಾರ್ಥಕದಿ 
ಸಾಯುವ ಮುನ್ನ 

#ಲಕ್ಕಿ_ಗರ್ಲ್ 

No comments:

Post a Comment